ಫಿಲಿಪ್ಸ್, ವಿಲಿಯಮ್ ಜಾನ್
	ಇಂಗ್ಲೀಷ್ ಶಿಕ್ಷಣತಜ್ಞ ಹಾಗೂ ಭಾಷಾ ಪಂಡಿತ. ಪೆನ್ನಲ್‍ವೇನೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕನಾಗಿದ್ದುಕೊಂಡು ಅಲ್ಲಿನ ಡಚ್ ಜಾನಪದದ ಬಗ್ಗೆ ಅಧ್ಯಯನ ನಡೆಸಿದವ. ಅಮೇರಿಕದ ಜಾನಪದ ಸಂಘ ಮತ್ತು ಆಧುನಿಕ ಭಾಷಾ ಸಂಸ್ಥೆಗಳ ಸದಸ್ಯ. ಪೆನ್ನಲ್‍ವೇನೀಯ ಜಾನಪದವನ್ನು ಸಮಗ್ರವಾಗಿ ಪರಿಶೀಲಿಸಿದ್ದು ಈತನ ಮಹಾತ್ಸಾಧನೆ. ಡಚ್ಚರ ವಲಸೆ ಗೀತೆಗಳು. ಪ್ರಕೃತಿಗೀತೆಗಳು. ಪ್ರೇಮ ಗೀತೆಗಳು ಮತ್ತು ಚಾರಿತ್ರಿಕ ದಾಖಲೆಯ ಲಾವಣಿಗಳು ಶಾಪ ಮತ್ತು ಪರಿಹಾರಕ್ಕೆ ಸಂಬಂಧಪಟ್ಟ ವಿಶಿಷ್ಟ ಆಚರಣೆಗಳು, ಬೇರೆ ಜನಪದಗಳಿಗಿಂತ ವಿಭಿನ್ನವಾದ ಇವರ ಸಾವಿನ ಆಚರಣೆಗಳು ಮುಂತಾದವನ್ನು ಸಂಗ್ರಹಿಸಿದ ಕೀರ್ತಿ ಈತನದು. 										   (ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ